bm.jpg

Notification and Announcements

30-11-2020

ಆತ್ಮೀಯ ಕನ್ನಡ ಬಂಧುಗಳೇ,
ನಮಸ್ಕಾರಗಳು.
ಬಿಎಂ ಕನ್ನಡಿಗರ ಬಳಗ(ರಿ)ದಲ್ಲಿ ತಮಗಿರುವ ವಿಶ್ವಾಸ ಹಾಗೂ ಕಳಕಳಿಗೆ ಧನ್ಯವಾದಗಳು. ಕೊರೋನಾದ ಕಾರಣದಿಂದ 2020ರ ಬಹುತೇಕ ಚಟುವಟಿಕೆಗಳು ಸ್ಥಗಿತಗೊಂಡವು. ಆದರೂ ಕೂಡ ಕಳೆದ ನವೆಂಬರ್ ಒಂದರಂದು ರಾಜ್ಯೋತ್ಸವವನ್ನು ನಾವು ಆಚರಿಸಿದ್ದು ನಿಮಗೆಲ್ಲ ತಿಳಿದಿದೆ.
2021ರಲ್ಲಿ ಬಳಗವು ತಮಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆಯೋಜಿಸಿದೆ. ಇಂತಹ ಕೆಲವು ಕಾರ್ಯಕ್ರಮಗಳ ಸುಳಿವುಗಳನ್ನು ರಾಜ್ಯೋತ್ಸವದಂದು ನಾವು ನಿಮಗೆ ತಿಳಿಸಿದ್ದೆವು. ಅದರಂತೆ ನಿನ್ನೆ ನಡೆದ ಪದಾಧಿಕಾರಿಗಳ ಕಾರ್ಯಕಾರಿ ಸಭೆಯಲ್ಲಿ ಈ ಕೆಳಕಂಡ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು ಎಂದು ತಿಳಿಸುವುದಕ್ಕೆ ಹರ್ಷವಾಗುತ್ತದೆ.
೧. ಈ ಮೊದಲೇ ತಿಳಿಸಿದಂತೆ ಬಳಗದ ಒಂದು website ತಯಾರಿಯ ಸಿದ್ಧತೆ ಸಾಗುತ್ತಿದೆ. ಹೊಸವರ್ಷದ ಪ್ರಾರಂಭದಲ್ಲಿ ಈ website ಕಾರ್ಯರೂಪಕ್ಕೆ ಬರುತ್ತದೆ.
೨. ಬಳಗದ ವರ್ಷಂಪ್ರತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಲು ಕಾರ್ಯಕಾರಿ ಸಮಿತಿಗಳನ್ನು ರಚಿಸಲಾಗುತ್ತಿದೆ. ಮುಂಬರುವ ಎಲ್ಲಾ ಸದಸ್ಯರುಗಳ ಸಭೆಯಲ್ಲಿ ಇದರ ಬಗ್ಗೆ ವಿವರವಾಗಿ ತಮಗೆ ತಿಳಿಸಲಾಗುತ್ತದೆ.
೩. ಇದರ ಜೊತೆಗೆ ಹೊಸವರ್ಷದಲ್ಲಿ ಬಳಗವು ಒಂದು ಹೊಸ ಪ್ರಯತ್ನದೊಂದಿಗೆ ನಿಮ್ಮ ಮುಂದೆ ಬರಲಿದೆ. ಬಿಎಂ ನಲ್ಲಿ ಬಹಳಷ್ಟು ಮಂದಿ ಓದುವ ಹವ್ಯಾಸವಿಟ್ಟುಕೊಂಡಿದ್ದಾರೆಂದು ನಮಗೆ ಗೊತ್ತು. ಅವರ ಆಸೆಯನ್ನು ಪೂರೈಸಲು ಹಾಗೂ ಉಳಿದವರಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಒಂದು ಚಿಕ್ಕ ಸಂಚಾರಿ ಗ್ರಂಥಾಲಯವನ್ನು ಸ್ಥಾಪಿಸಲಾಗುವುದು. ಮಕ್ಕಳಿಂದ ಹಿಡಿದು ದೊಡ್ಡವರ ಅಭಿರುಚಿಗೆ ತಕ್ಕಂತೆ ಇರುವ ಪುಸ್ತಕಗಳನ್ನು ಬಳಗದ ಗ್ರಂಥಾಲಯದಿಂದ ಪ್ರತಿವಾರ ಒದಗಿಸಲಾಗುವುದು.
ಇವಲ್ಲದೆ ಬಳಗವನ್ನು ಬೆಳೆಸುವ ನಿಟ್ಟಿನಲ್ಲಿ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ನಾವು ಆಯೋಜಿಸಿ ಕೊಂಡಿದ್ದೇವೆ. ಅವುಗಳನ್ನೆಲ್ಲ ಸರಿಯಾದ ಸಮಯದಲ್ಲಿ ನಿಮ್ಮ ಮುಂದೆ ಖಂಡಿತವಾಗಿಯೂ ಇಡುತ್ತೇವೆ.
ಒಂದು ಸಂಸ್ಥೆ ಬೆಳೆಯಬೇಕಾದರೆ ಅದಕ್ಕೆ ಜನಬಲ ಬೇಕು, ಅವರ ಸಹಯೋಗಿತ್ವ ಬೇಕು. ಅದಕ್ಕಾಗಿ ಬಿಎಂ ಕನ್ನಡಿಗರ ಒಂದು ಯಾದಿಯನ್ನು ತಯಾರಿಸುತ್ತಿದ್ದೇವೆ ಹಾಗೂ ಸದಸ್ಯತ್ವದ ಪ್ರಸ್ತಾವನೆಯನ್ನು ಕೂಡ ಈ ಮೂಲಕ ಇಡುತ್ತಿದ್ದೇವೆ.
ಬಿಎಂ ಕನ್ನಡಿಗರ ಬಳಗ(ರಿ)ದ ಸದಸ್ಯತ್ವದ ವಿವರಗಳು:
- ಒಂದು ಕುಟುಂಬದ ಇಬ್ಬರ ಅಜೀವ ಸದಸ್ಯತ್ವ ಶುಲ್ಕ ರೂ 500. ಕುಟುಂಬದ ಪ್ರತಿ extra ಸದಸ್ಯರುಗಳು ರೂ  250 ಪಾವತಿಸಬೇಕು.
- ಸದಸ್ಯರುಗಳಿಗೆ ಸದಸ್ಯತ್ವದ ಬ್ಯಾಡ್ಜ್ ಹಾಗೂ ಬಳಗದ ಕಾರ್ಯಸೂಚಿಯ ಕಿರು ಕೈಪಿಡಿಯನ್ನು ನೀಡಲಾಗುವುದು.
- ಬಳಗದ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹಾಗೂ ಇನ್ನಿತರ ಸೌಲಭ್ಯಗಳಲ್ಲಿ ಸದಸ್ಯರುಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು.
- ಬಳಗದ ಮುಂದಿನ ಪದಾಧಿಕಾರಿಗಳನ್ನು ಸದಸ್ಯರುಗಳಲ್ಲಿ ಆಯ್ಕೆ ಮಾಡಲಾಗುವುದು.
ಉಳಿದಂತೆ ಇನ್ನೂ ಹಲವು ವಿವರವಾದ ವಿಚಾರಗಳನ್ನು ತಮ್ಮಲ್ಲಿ ಮತ್ತೆ ನಾವು ಹಂಚಿಕೊಳ್ಳುತ್ತೇವೆ.
ಕನ್ನಡಿಗರ ಯಾದಿಯನ್ನು ಸಿದ್ಧಪಡಿಸುವುದಕ್ಕೋಸ್ಕರ ನಾವು ಈ ಮೂಲಕ ತಮ್ಮಲ್ಲಿ ಒಂದು ಗೂಗಲ್ ಫಾರ್ಮನ್ನು ಹಂಚಿಕೊಳ್ಳುತ್ತಿದ್ದೇವೆ. ತಾವು ದಯಮಾಡಿ ಈ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗಿ ಕಳಕಳಿಯ ವಿನಂತಿ.
ಎಂದಿನಂತೆ ತಮ್ಮ ಸಹಕಾರ ಬಳಗಕ್ಕೆ ಇರಲಿ.

ನಾಗೇಂದ್ರ ಹೆಗಡೆ
ಕಾರ್ಯದರ್ಶಿ
ಬಿಎಂ ಕನ್ನಡಿಗರ ಬಳಗ (ರಿ)